Sunday, July 26, 2009
japange bandamele
Fun 0ಜಪಾನ್ಗೆ ಬಂದ್ವಿ ........ಇಲ್ಲಿಗೆ ಎರಡೆರಡು ಏರೋಪ್ಲೇನ್ ಹತ್ಕೊಂಡು ಬಂದ್ವಿ ........ಇಲ್ಲಿ ಮನೆ ಅಲ್ಲಿಗಿಂತ ಚಿಕ್ಕದ್ದು ಆದ್ರೆ ಬಹಳ ಚೆನ್ನಾಗಿದೆ .......ಮತ್ತ್ತೆ ಎಲ್ಲ ಮಾಮೂಲಿ ಯಾಗಿದೆ ....ಅಪ್ಪ ದಿನಾ ಆಫೀಸಿಗೆ ಹೋಗ್ತಾರೆ .....ಅಮ್ಮ ದಿನ ಅಡುಗೆ ಮಾಡ್ತಾರೆ ......ನಂಗೆ ಅಜ್ಜ ದೊಡ್ಡಮ್ಮ ಎಲ್ಲ ತುಂಬಾ ನೆನಪಾಗುತ್ತಾರೆ ......ಅವರನ್ನ ದಿನ ಕಂಪ್ಯೂಟರ್ ನಲ್ಲಿ ನೋಡ್ತಾ ಇರ್ತಿನಿ .......ಇಷ್ಟು ದಿನ ಏನೇನು ಮಾಡ್ದೆ ಅಂತಾ ಅಪ್ಪನ ಹತ್ರ ಹೇಳ್ತಾ ಇದ್ದೆ .....ಅಪ್ಪ ಅಂತು ನಕ್ಕಿದ್ದೆ ನಕ್ಕಿದ್ದು ......ನೋಡಿ ಹೇಗ್ ನಗ್ತಾ ಇದ್ದಾರೆ ಅಂತ .....
Saturday, July 18, 2009
japan ge horatvi
Journey 0ನೋಡಿದ್ರಾ .......ಜಪಾನ್ ಗೆ ಹೊರಡೋ ದಿನ ಬಂದೆ ಬಿಡ್ತು!!! ಅಪ್ಪ ಅಮ್ಮಂಗೆ ಪುರುಸೊತ್ತೇ ಇಲ್ಲ ... ಜಪಾನ್ಗೆ ತಗೊಂಡ್ ಹೋಗೋಕೆ ದೊಡ್ಡ ದೊಡ್ಡ ಬ್ಯಾಗ್ ಗಳ್ಳನ್ನ ಪ್ಯಾಕ್ ಮಾಡ್ತಾ ಇದ್ದಾರೆ!!! . ನನಗೇನು ಕೆಲಸಾನೆ ಇಲ್ಲ ........ ಅದಕ್ಕೆ ನಿಮಗೆಲ್ಲ ಟಾಟಾ ಹೇಳೋಣ ಅಂತ ಬಂದೆ .........ಸರಿ ಮತ್ತೆ ಜಪಾನ್ಗೆ ಹೋದಮೇಲೆ ಸಿಗುವ ........
Tuesday, July 14, 2009
hesru ittiddu
ceremony 1ನೆನ್ನೆ ನಂಗೆ ಹೆಸ್ರು ಇಟ್ಟ್ರು ಗೊತ್ತಾ ????? ಅನಘ ಅಂತ ........ಹೇಗಿದೆ ಹೆಸ್ರು ? ಚೆನ್ನಾಗಿದ್ಯ? ನಂಗಂತೂ ತುಂಬಾನೇ ಇಷ್ಟ ಆಯಿತು ......
ನೆನ್ನೆ ನಂಗೆ ಹೊಸ ರೇಷ್ಮೆ ಲಂಗ ಹಾಕಿ ಚೆನ್ನಾಗಿ ಡ್ರೆಸ್ ಮಾಡಿದ್ರು..........
ಎಷ್ಟು ಜನ ಬಂದಿದ್ರು ಗೊತ್ತ ನನ್ ನೋಡೋಕೆ ......
ನಾನು ಅಪ್ಪ ಅಮ್ಮನ ಜೊತೆ ಹೋಮದ ಮುಂದೆ ಕೂತಿದ್ದೆ ........
ಅಪ್ಪನ ಪಕ್ಕ ಕೂತಿದ್ದವರು ಪುರೋಹಿತರಂತೆ ಅವರು ಅಪ್ಪನ ಹತ್ರ ಏನೇನೊ ಹೇಳಿಸಿದ್ರು ಏನೇನೊ ಮಾಡಿಸಿದ್ರು ನಂಗಂತೂ ಏನು ಅರ್ಥ ನೆ ಆಗ್ಲಿಲ್ಲ
ಸುಮ್ನೆ ಅಮ್ಮನ ಕಾಲ್ ಮೇಲೆ ಕೂತಿದ್ದೆ .....ಆಮೇಲೆ ಅಪ್ಪ ನನ್ ಕಿವಿಯಲ್ಲಿ ಅನಘ ಅಂತ ಮೂರೂ ಸಲ ಹೇಳಿದ್ರು
ಆಗ್ಲೇ ಅದೇ ನನ್ ಹೆಸ್ರು ಅಂತ ಗೊತಾಗಿದ್ದು .......
ಎಲ್ರು ನಂಗೆ ಏನೇನೋ ಉಡುಗೊರೆ ಕೊಟ್ರು ಗೊತ್ತಾ ????
ಎಷ್ಟು ಚೆನ್ನಾಗಿತ್ತು .........ಫೋಟೊಗಳನ್ನ ಹಾಕಿದ್ದೀನಿ ನೀವೇ ನೋಡಿ.
Saturday, July 11, 2009
appa baruthaarantae
Journey 0
ಇವತ್ತು ನನ್ ಅಪ್ಪ ಜಪಾನ್ನಿಂದ ಬರ್ತಾ ಇದಾರಂತೆ ...... ಬಂದು ನಂಗೆ ಹೊಸ ಹೆಸ್ರು ಕೊಡ್ತಾರಂತೆ....... ಆಮೇಲೆ ನನ್ನ ಮತ್ತೆ ಅಮ್ಮನ್ನ ಜಪಾನ್ಗೆ ಕರ್ಕೊಂಡು ಹೋಗ್ತಾರಂತೆ.... ಅಪ್ಪನ ಜೊತೆ ಹೋಗೋಕೆ ನಂಗಂತೂ ತುಂಬಾ ಕುಶಿ ಆಗ್ತಾ ಇದೆ ...... ಆದ್ರೆ ಇಲ್ಲಿ ಎಲ್ರನ್ನು ಬಿಟ್ ಹೋಗಬೇಕಲ್ಲ ಅಂತ ಬೇಜಾರು .......... ಇನ್ನೊಂದ್ ವಿಷ್ಯ ಗೊತ್ತ ನಿಮ್ಗೆ ? ಜಪಾನು ತುಂಬಾ ದೂರ ಇದ್ಯಂತೆ ಅಲ್ಲಿಗೆ ಎರೋಪ್ಲೇನಿನಲ್ಲಿಯೇ ಹೋಗಬೇಕಂತೆ ...... ಆದ್ರೆ ನಂಗೇನು ಭಯ ಇಲ್ಲಪ್ಪ ಅಪ್ಪ ಅಮ್ಮ ನನ್ ಜೊತೆ ಇರುತಾರಲ್ಲ .............. ಇನ್ನೇನು?
Thursday, July 9, 2009
car nalli........
Car 0ಇವತ್ತು ನಾನು, ನನ್ ದೊಡ್ಡಮ್ಮ ಏನ್ ಮಾಡಿದ್ವಿ ಗೊತ್ತಾ ..... ಮಾವಂಗೆ ಗೊತ್ತೀಲಾದ್ ಹಾಗೇನೆ ಅವರ ಕಾರ್ ಕೀ ನ ತಗೊಂಡು ಹೋಗಿ ಕಾರ್ ನಲ್ಲಿ ಕುತ್ಕೊಂದ್ವಿ ಇನ್ನೇನು ಓಡಿಸಬೇಕು ಅನ್ನೋಸ್ತ್ರಲ್ಲಿ ಅಮ್ಮ ನಮ್ ಫೋಟೋ ಹೊಡೆದುಬಿಟ್ರು ... ಆಮೇಲೆ ಹೋಗಿ ಮಾವಂಗೆ ಹೇಳಿಕೊಟ್ರು ......... ಆದ್ರೆ ನನ್ ಮಾವ ತುಂಬಾ ಒಳ್ಳೆಯವರು... ಏನು ಬೈಲಿಲ್ಲ ...... ಅದ್ರು ಬದಲು ನನ್ನ ಕಾರಲ್ಲಿ ಒಂದು ರೌಂಡ್ ಕರ್ಕೊಂಡು ಹೋಗಿ ಬಂದ್ರು ............... ಎಷ್ಟು ಮಜಾ ಇತ್ತು ಗೊತ್ತಾ !!!!!!!!!!!
Subscribe to:
Posts (Atom)

