ನೆನ್ನೆ ನಾವು ಎಲ್ಲಿ ಹೋಗ್ಗಿದ್ದು ಗೊತ್ತಾ ........ ಟೋಕ್ಯೋನಲ್ಲಿ ವಿನಸ್ ಫೊರ್ಟ್ ಅನ್ನೋ ಜಾಗ ಇದೆ .....ಅಲ್ಲಿಗೆ ಹೋಗಿದ್ದು...... ಮತ್ತೆ ಅಲ್ಲಿಂದ ಟೋಕ್ಯೋ ಮಿಡ್ ಟೌನ್ ಅನ್ನೋ ಜಾಗಕ್ಕೆ ಹೋಗಿದ್ವಿ ......... ವಿನಸ್ ಫೊರ್ಟ್ ಅನ್ನೋದು ಒಂದು ದೊಡ್ಡ ಬಿಲ್ಡಿಂಗ್ ........ಆದ್ರೆ ಅದರ ಒಳಗಡೆನು ಇನ್ನೊಂದು ಆಕಾಶ ಇದೆ ಗೊತ್ತಾ ........ಅಲ್ಲೆಲ್ಲ ಎಸ್ಟೊಂದು ಥರ ಥರದ ದೀಪ ಹಾಕಿದ್ರು ........ಅಬ್ಬ !!! ಎಷ್ಟು ಚೆನ್ನಾಗಿತ್ತು ಅಂತಿರಾ .......
ಅಲ್ಲಿಂದ ನಾವು ಟೋಕ್ಯೋ ಮಿಡ್ ಟೌನ್ ಗೆ ಹೋದ್ವಿ ......ಚಳಿ ಇನ್ನು ಜಾಸ್ತಿ ಆಗಿತ್ತು .....ಆದ್ರೆ ಅಮ್ಮ ಅಸ್ತ್ರಲ್ಲಿಯೇ ನಂಗೆ ಸ್ವೆಟರ್ ಜೊತೆ ಟೊಪ್ಪಿನು ಹಾಕಿ ಚೆನ್ನಾಗಿ ಹೊದ್ದಿಸಿ ಬಿಟ್ಟಿದ್ರು ......ನೋಡಿ ಬರಿ ನನ್ ಮುಖ ಮಾತ್ರ ಕಾಣಿಸ್ತಾ ಇದೆ .......ಇಲ್ಲೂ ಕೂಡ ಎಂತೆಂತ ದೀಪಗಳು ಅಂತಿರಾ ...... ನಂಗಂತೂ ಹೇಳೋಕೆ ಬರ್ತಾ ಇಲ್ಲ .......ನೀವೇ ನೋಡಿ........
Sunday, December 20, 2009
venus fort and tokyo midtown
Fun, travel 0Saturday, December 19, 2009
hosa aata saamaanu
Fun, toys 0
ಇವತ್ತು ಅಮ್ಮ ನಂಗೆ ಬೆಳಗ್ಗೆ ಬೇಗ ಹೊಸ ಬಟ್ಟೆ ಹಾಕಿ ರೆಡಿ ಮಾಡಿದ್ದಾರೆ ......
ಯಾಕೇಂತ ನಂಗೇನು ಗೊತ್ತಿಲ್ಲ .......ಸರಿ ನನ್ನ ಪಾಡಿಗೆ ನಾನು ಹಾಸಿಗೆ ಹತ್ತಿ ಆಟ ಆಡುತ ಇದ್ದೆ ......
ಆದ್ರೆ ಅಮ್ಮ ನನ್ನ ಕೆಳಗೆ ಇಳಿಸಿ ಬಿಟ್ರು .......ಅದಕ್ಕೆ ನಾನು ,ಅದೇ ನೆನ್ನೆ ನನಗೆ ಅಂತ ಹೊಸ ಆಟ ಸಾಮಾನು ತಂದಿದ್ರಲ್ಲ ಅದರ ಜೊತೆ ಆಟ ಆಡುತ ಇದ್ದೆ .......ಎಷ್ಟು ಚೆನ್ನಾಗಿದೆ ಗೊತ್ತಾ ...
ಅದರಿಂದ ಎಸ್ಟೊಂದು ಬೇರೆ ಬೇರೆ ತರದ ಶಬ್ದ ಬರುತ್ತೆ ಗೊತ್ತಾ .......ಅಪ್ಪ ಅಮ್ಮಂಗು ಕರೆದು ತೋರಿಸಿದೆ ....ಅವರಿಗೂ ಕುಶಿ ಆಯಿತು .....ನಂಗಂತೂ ಕುಶಿನೋ ಕುಶಿ ......

ಈಗ ಅವರಿಬ್ಬರೂ ರೆಡಿ ಆಗ್ತಾ ಇದ್ದಾರೆ .........ಎಲ್ಲಿಗೆ ಅಂತ ಹೋಗಿ ಬಂದ ಮೇಲೆ ಹೇಳ್ತೀನಿ ಆಯ್ತಾ ...........
Subscribe to:
Posts (Atom)




