Sunday, December 20, 2009

venus fort and tokyo midtown

0

ನೆನ್ನೆ ನಾವು ಎಲ್ಲಿ ಹೋಗ್ಗಿದ್ದು ಗೊತ್ತಾ ........ ಟೋಕ್ಯೋನಲ್ಲಿ ವಿನಸ್ ಫೊರ್ಟ್ ಅನ್ನೋ ಜಾಗ ಇದೆ .....ಅಲ್ಲಿಗೆ ಹೋಗಿದ್ದು...... ಮತ್ತೆ ಅಲ್ಲಿಂದ ಟೋಕ್ಯೋ ಮಿಡ್ ಟೌನ್ ಅನ್ನೋ ಜಾಗಕ್ಕೆ ಹೋಗಿದ್ವಿ ......... ವಿನಸ್ ಫೊರ್ಟ್ ಅನ್ನೋದು ಒಂದು ದೊಡ್ಡ ಬಿಲ್ಡಿಂಗ್ ........ಆದ್ರೆ ಅದರ ಒಳಗಡೆನು ಇನ್ನೊಂದು ಆಕಾಶ ಇದೆ ಗೊತ್ತಾ ........ಅಲ್ಲೆಲ್ಲ ಎಸ್ಟೊಂದು ಥರ ಥರದ ದೀಪ ಹಾಕಿದ್ರು ........ಅಬ್ಬ !!! ಎಷ್ಟು ಚೆನ್ನಾಗಿತ್ತು ಅಂತಿರಾ .......
ಅಲ್ಲಿಂದ ನಾವು ಟೋಕ್ಯೋ ಮಿಡ್ ಟೌನ್ ಗೆ ಹೋದ್ವಿ ......ಚಳಿ ಇನ್ನು ಜಾಸ್ತಿ ಆಗಿತ್ತು .....ಆದ್ರೆ ಅಮ್ಮ ಅಸ್ತ್ರಲ್ಲಿಯೇ ನಂಗೆ ಸ್ವೆಟರ್ ಜೊತೆ ಟೊಪ್ಪಿನು ಹಾಕಿ ಚೆನ್ನಾಗಿ ಹೊದ್ದಿಸಿ ಬಿಟ್ಟಿದ್ರು ......ನೋಡಿ ಬರಿ ನನ್ ಮುಖ ಮಾತ್ರ ಕಾಣಿಸ್ತಾ ಇದೆ .......ಇಲ್ಲೂ ಕೂಡ ಎಂತೆಂತ ದೀಪಗಳು ಅಂತಿರಾ ...... ನಂಗಂತೂ ಹೇಳೋಕೆ ಬರ್ತಾ ಇಲ್ಲ .......ನೀವೇ ನೋಡಿ........

Saturday, December 19, 2009

hosa aata saamaanu

0

ಇವತ್ತು ಅಮ್ಮ ನಂಗೆ ಬೆಳಗ್ಗೆ ಬೇಗ ಹೊಸ ಬಟ್ಟೆ ಹಾಕಿ ರೆಡಿ ಮಾಡಿದ್ದಾರೆ ......




ಯಾಕೇಂತ ನಂಗೇನು ಗೊತ್ತಿಲ್ಲ .......ಸರಿ ನನ್ನ ಪಾಡಿಗೆ ನಾನು ಹಾಸಿಗೆ ಹತ್ತಿ ಆಟ ಆಡುತ ಇದ್ದೆ ......












ಆದ್ರೆ ಅಮ್ಮ ನನ್ನ ಕೆಳಗೆ ಇಳಿಸಿ ಬಿಟ್ರು .......ಅದಕ್ಕೆ ನಾನು ,ಅದೇ ನೆನ್ನೆ ನನಗೆ ಅಂತ ಹೊಸ ಆಟ ಸಾಮಾನು ತಂದಿದ್ರಲ್ಲ ಅದರ ಜೊತೆ ಆಟ ಆಡುತ  ಇದ್ದೆ .......ಎಷ್ಟು ಚೆನ್ನಾಗಿದೆ ಗೊತ್ತಾ  ...








ಅದರಿಂದ ಎಸ್ಟೊಂದು ಬೇರೆ ಬೇರೆ ತರದ ಶಬ್ದ ಬರುತ್ತೆ ಗೊತ್ತಾ .......ಅಪ್ಪ ಅಮ್ಮಂಗು ಕರೆದು ತೋರಿಸಿದೆ ....ಅವರಿಗೂ ಕುಶಿ ಆಯಿತು .....ನಂಗಂತೂ ಕುಶಿನೋ ಕುಶಿ ......

















ಈಗ ಅವರಿಬ್ಬರೂ ರೆಡಿ ಆಗ್ತಾ ಇದ್ದಾರೆ .........ಎಲ್ಲಿಗೆ ಅಂತ ಹೋಗಿ ಬಂದ ಮೇಲೆ ಹೇಳ್ತೀನಿ ಆಯ್ತಾ ...........

Thursday, November 26, 2009

nintiddu

0

ಇವತ್ತು ನಾನು ಏನು ಹಿಡಿದು ಕೊಳ್ಳದೆ ನಿಂತುಕೊಂಡೆ ಗೊತ್ತಾ ? ನಂಗಂತೂ ಕುಶಿನೋ ಕುಶಿ ......ಮೊನ್ನೆ ಮೊನ್ನೆ ತಾನೇ ಹಲ್ಲು ಬಂತು .....ಈಗ ಎದ್ದು ನಿಲ್ಲುತಿನಿ ...ನೋಡ್ತಾ ಇರಿ ನಾನು ಬೇಗ ದೊಡ್ಡವಳಾಗಿ ಬಿಡ್ತೀನಿ ....ಹಹಹಹಹ

Monday, November 23, 2009

showa kinen park

0

ಇಲ್ಲಿ ಇವಾಗ ಚಳಿ ಶುರು ಆಗುತಾ ಇದೆ .....ಈ ಟೈಮ್ ಅಲ್ಲಿ ಎಲೆಗಳ್ಳೆಲ್ಲ ಹಳದಿ ಬಣ್ಣ ಆಗುತೆ ಅಂತೆ ....ನಾನ್ ನಂಬಲ್ಲಿಲ್ಲಪ್ಪ ......ಅವು ಹಸಿರಲ್ವ ಇರೋದು ????? ಅದಕ್ಕೆ ಅಪ್ಪ ಅಮ್ಮ ನನ್ನ ಇಲ್ಲಿ ಶೋವ ಕಿನೇನ್ ಪಾರ್ಕ್ ಅನ್ನೋ ಕಡೆ ಕರ್ಕೊಂಡು ಹೋಗಿದ್ರು .........

ಹಾ ...ಹೌದು .......ನಿಜವಾಗಲು ಬಣ್ಣ ಬೇರೆ ಆಗುತ್ತೆ ಈ ಟೈಮ್ ಅಲ್ಲಿ .......ಬೇಕಾದರೆ ನೀವೇ ನೋಡಿ .....ನಾವು ಅಲ್ಲೇ ಮರದ ಕೆಳಗಡೆ ಹಾಸ್ಕೊಂಡು ಊಟ ಮಾಡಿ ,ಆಟ ಆಡಿ,ಸುತಾಡ್ಕೊಂಡು ......ಮನೆಗೆ ಬರೋ ಅಷ್ಟ್ರಲ್ಲಿ ರಾತ್ರಿ!!!!!


Friday, November 20, 2009

nanna modala hallu

0

 ನಂಗೆ ಹಲ್ಲು  ಬರ್ತಾ ಇದೆ ...... .ಕೆಳಗಿನದು ..... ನೋಡಿ ಬೇಕಾದರೆ ...... ಮೆತ್ತಗೆ ಹೋಗಿ ಅಪ್ಪಂಗೆ ಕಚ್ಚಿ  ಬಿಡಲ ......... ಸುಮ್ನೆ ತಮಾಷೆಗೆ ........


Sunday, November 1, 2009

kannada raajyotsava

0




ಇವತ್ತು ನಮ್ ಕನ್ನಡ ರಾಜ್ಯೋತ್ಸವ ಅಂತೆ .....ಆದ್ರೆ ಇವತ್ತು ಸೋಮವಾರ ....ಎಲ್ರಿಗೂ ಕೆಲೆಸ ಇರುತೆ ......ಅದಕ್ಕೆ ನಮ್ ಕರ್ನಾಟಕದವರೆಲ್ಲ  ಸೇರಿ ನೆನ್ನೆನೇ  ಆಚರಿಸ್ಕೊಂಡವಿ .......ಇಲ್ಲಿ  ಹಾಡು ಕುಣಿತ ಎಲ್ಲ ಇತ್ತು ನೋಡಿ ನಾನು ಒಳ್ಳೆ ಹುಡುಗಿ ಥರ ಅಮ್ಮನ ಕಾಲ್ ಮೇಲೆ ಸುಮ್ನೆ ಕುತ್ಕೊಂಡಿದ್ದೇನೆ ........ ಆಮೇಲೆ ಎಲ್ರು ಸೇರಿ ಒಟ್ಟಿಗೆ ಫೋಟೋ  ಕೂಡ ತೆಗೆಸಿ ಕೊಂಡ್ವಿ .....ನಾನು ಈ ಫೋಟೋದಲ್ಲಿ ಎಲ್ಲಿ ಇದ್ದೀನಿ ಹೇಳಿ ನೋಡೋಣ ........

Sunday, October 18, 2009

deepaavali habba

0

ನೆನ್ನೆ ದೀಪಾವಳಿ ಹಬ್ಬ ......ಅಮ್ಮ ಎಲ್ಲ ಕಡೆ ದೀಪ ಹಚ್ಚಿದರಿಂದ ಹುಷಾರಾಗಿ ಇರು ಅಂದಿದ್ರು .....ಅದಕ್ಕೆ ಅಪ್ಪನ ಪಕ್ಕ ಒಳ್ಳೆ ಹ್ದುಗಿ ತರ ಕುತ್ಕೊಂಡಿದ್ದೇನೆ .....







ಆದ್ರೆ ನಾನಂತೂ ಪಟಾಕಿ ಹೊಡೆಯೋದಕ್ಕೆ ಕಾಯುತಾ ಇದ್ದೆ .....ಇಲ್ಲಿ ಈ ಟೈಮ್ ಅಲ್ಲಿ ಪಟಾಕಿ ಸಿಗೊಲ್ವಂತೆ .....ಅದಕ್ಕೆ ಅಪ್ಪ ಅವತ್ತೇ ಪಟಾಕಿ ತಂದು ಇಟ್ಟಿದ್ರು .... ಅಮ್ಮ ರೇಷ್ಮೆ ಲಂಗ ಹಾಕಿ ನನ್ನ ರೆಡಿ  ಮಾಡಿದ್ರು ...ಅಪ್ಪನ ಫ್ರೆಂಡ್ಸ್ ಎಲ್ಲ ಬಂದಿದ್ರು ....





ಅವರೆಲ್ಲರ ಜೊತೆ ಆಟ ಆಡಿ ,ಅಮ್ಮ ಮಾಡಿದ್ದ ಸಿಹಿ ತಿಂದು ಗ್ರೌಂಡ್ ಗೆ ಹೋಗಿ ಎಲ್ಲಾ ಪಟಾಕಿನು  ಹೊಡೆದು ಬಿಟ್ವಿ .......ಎಷ್ಟು ಮಜಾ ಇತ್ತು ಗೊತ್ತಾ .......

ಇವತ್ತು ಕೂಡ ದೀಪಾವಳಿ ಹಬ್ಬ.......ಅಮ್ಮ ಹೊಸ ಬಟ್ಟೆ ಹಾಕಿದ್ದ್ದಾರೆ ......

ಆದ್ರೆ ಪಟಾಕಿನೆ  ಇಲ್ಲ  .....ಎಲ್ಲ ನೆನ್ನೆನೇ ಕಾಲಿ..........ಅದಕ್ಕೆ ಬರಿ ಬೇಜಾರು ......









ಆದ್ರೆ ಅಮ್ಮ ಇವತ್ತು ಕೂಡ ಸಿಹಿ ಮಾಡ್ತಾ ಇದ್ದಾರೆ .................ಯುಮ್ಮಿ.







 ಇನ್ನು ಜಾಸ್ತಿ ಫೋಟೋ ಗೆ ಇಲ್ಲಿ ಕ್ಲಿಕ್ ಮಾಡಿ


Sunday, September 27, 2009

indian festival

0

ಇವತ್ತು ಟೋಕ್ಯೋ ನಲ್ಲಿರೋ  ಒಂದು ದೊಡ್ಡ ಗ್ರೌಂಡ್ ನಲ್ಲಿ ನಮ್ ಭಾರತದವರೆಲ್ಲ ಸೇರುತಾರಂತೆ.......ಅಪ್ಪ, ಅಮ್ಮ, ನಾನು ಎಲ್ರು ಕುಶಿ ಇಂದ ಬೇಗ ರೆಡಿ ಯಾಗಿ ಬಿಟ್ವಿ, ಆದ್ರೆ ಬಸ್ ಬರೋಕೆ ಇನ್ನು ತುಂಬಾ ಟೈಮ್ ಇದೆ  ಅದಕ್ಕೆ ಸುಮ್ನೆ ಕೊತ್ಕೊಂಡ್ ಫೋಟೋ ತೆಗೆಸ್ಕೊಂಡವಿ ......ನೋಡಿ ನಾನು ಅಮ್ಮ ಮ್ಯಾಚಿಂಗ್ ಮ್ಯಾಚಿಂಗ್ ಅಲ್ವ??



Sunday, September 13, 2009

sri krishna janmastami

0

ಇವತ್ತು ಶ್ರೀ ಕೃಷ್ಣ ಹುಟ್ಟಿದ ದಿನ ಅಂತೆ......ಅದಕ್ಕೆ ಅಮ್ಮ ನಂಗೆ ಹೊಸ ಬಟ್ಟೆ ಹಾಕಿದ್ರು ....ಇದು ನಮ್ ಮತ್ತಿಕೆರೆ ದೊಡ್ಡಮ್ಮ ಹೊಲಿದಿದ್ದು ಅಂತೆ ....ಚೆನ್ನಾಗಿ ಕಾಣಿಸ್ತೀನಿ ಅಲ್ವ ......

ಅಮ್ಮ ಶ್ರೀ ಕೃಷ್ಣಂಗೆ ಇಷ್ಟ ಅಂತ ಅವಲಕ್ಕಿ ,ಉಂಡೆ ,ಕೊಡಬಳೆ  ಇನ್ನು ಏನೇನೊ ಮಾಡಿದ್ರು ......ಎಲ್ಲ ದೇವ್ರು ಮುಂದೆ ಇಟ್ಟು ಪೂಜೆ ಮಾಡುತಾ ಇದ್ದಾರೆ ...ಆಮೇಲೆ ನಂಗೆ ಕೊಡ್ತಾರಂತೆ ...ಯಾವಾಗ ಪೂಜೆ ಮುಗಿಯತ್ಹೋ ಏನೋ ನಾನು ಕಾಯುತ  ಇದ್ದೀನಿ , ಯಾರಿಗೂ ಗೊತಿಲ್ಲದ ಹಾಗೆ ಮೆತ್ತಗೆ ಹೋಗಿ ಒಂದ್ ಕೊಡಬಳೆ ತಗೊಂಡು ಬಂದು ಬಿಡಲ  .........




Saturday, August 1, 2009

varamahalakshmi habba

0

ನೆನ್ನೆ ವರಮಹಾಲಕ್ಷ್ಮಿ ಹಬ್ಬ ಅಂತೆ ಅದಕ್ಕೆ ಅಮ್ಮ ನಂಗೆ ಹೊಸ ಬಟ್ಟೆ ಹಾಕಿದ್ರು.....ಇದು ನಮ್ ಬಡಾಕೆರೆ ದೊಡ್ಡಮ್ಮ ನನಗೋಸ್ಕರ ಹೊಲ್ದಿದ್ದಂತೆ .....ಆಮೇಲೆ ಅಮ್ಮ ಪುಜೆನು ಮಾಡಿದ್ರು ,ಅಕ್ಕ ಪಕ್ಕದ್ ಮನೆ ಆನ್ತಿದಿರು ಬಂದಿದ್ರು ,ಅವರೆಲ್ಲರು ಹೋದಮೇಲೆ ಅಪ್ಪ ತಂದಿರೋ ಹೊಸ ಸೀಟ್ ಮೇಲೆ ಕುತ್ಕೊಂಡೆ ......ಎಷ್ಟು  ಸುಸ್ತಾಗಿತ್ತು ಗೊತ್ತಾ ....ಆದ್ರೆ ಈ ಸೀಟ್  ಚೆನ್ನಾಗಿದೆ ...... ಆರಾಮಾಗಿದೆ .........





Sunday, July 26, 2009

japange bandamele

0




ಜಪಾನ್ಗೆ ಬಂದ್ವಿ ........ಇಲ್ಲಿಗೆ  ಎರಡೆರಡು ಏರೋಪ್ಲೇನ್ ಹತ್ಕೊಂಡು ಬಂದ್ವಿ ........ಇಲ್ಲಿ ಮನೆ ಅಲ್ಲಿಗಿಂತ ಚಿಕ್ಕದ್ದು ಆದ್ರೆ ಬಹಳ ಚೆನ್ನಾಗಿದೆ .......ಮತ್ತ್ತೆ ಎಲ್ಲ ಮಾಮೂಲಿ ಯಾಗಿದೆ ....ಅಪ್ಪ ದಿನಾ ಆಫೀಸಿಗೆ ಹೋಗ್ತಾರೆ .....ಅಮ್ಮ ದಿನ ಅಡುಗೆ ಮಾಡ್ತಾರೆ ......ನಂಗೆ ಅಜ್ಜ ದೊಡ್ಡಮ್ಮ ಎಲ್ಲ ತುಂಬಾ ನೆನಪಾಗುತ್ತಾರೆ ......ಅವರನ್ನ ದಿನ ಕಂಪ್ಯೂಟರ್ ನಲ್ಲಿ ನೋಡ್ತಾ ಇರ್ತಿನಿ .......ಇಷ್ಟು ದಿನ ಏನೇನು ಮಾಡ್ದೆ ಅಂತಾ ಅಪ್ಪನ ಹತ್ರ ಹೇಳ್ತಾ ಇದ್ದೆ .....ಅಪ್ಪ ಅಂತು ನಕ್ಕಿದ್ದೆ ನಕ್ಕಿದ್ದು ......ನೋಡಿ ಹೇಗ್ ನಗ್ತಾ ಇದ್ದಾರೆ ಅಂತ .....

Saturday, July 18, 2009

japan ge horatvi

0



ನೋಡಿದ್ರಾ .......ಜಪಾನ್ ಗೆ ಹೊರಡೋ ದಿನ ಬಂದೆ ಬಿಡ್ತು!!! ಅಪ್ಪ ಅಮ್ಮಂಗೆ  ಪುರುಸೊತ್ತೇ ಇಲ್ಲ ... ಜಪಾನ್ಗೆ ತಗೊಂಡ್ ಹೋಗೋಕೆ ದೊಡ್ಡ ದೊಡ್ಡ ಬ್ಯಾಗ್ ಗಳ್ಳನ್ನ ಪ್ಯಾಕ್ ಮಾಡ್ತಾ ಇದ್ದಾರೆ!!! .  ನನಗೇನು ಕೆಲಸಾನೆ ಇಲ್ಲ ........   ಅದಕ್ಕೆ ನಿಮಗೆಲ್ಲ  ಟಾಟಾ ಹೇಳೋಣ ಅಂತ ಬಂದೆ .........ಸರಿ ಮತ್ತೆ ಜಪಾನ್ಗೆ ಹೋದಮೇಲೆ ಸಿಗುವ ........

Tuesday, July 14, 2009

hesru ittiddu

1







ನೆನ್ನೆ ನಂಗೆ ಹೆಸ್ರು ಇಟ್ಟ್ರು ಗೊತ್ತಾ ????? ಅನಘ ಅಂತ ........ಹೇಗಿದೆ ಹೆಸ್ರು ? ಚೆನ್ನಾಗಿದ್ಯ? ನಂಗಂತೂ ತುಂಬಾನೇ ಇಷ್ಟ ಆಯಿತು ......
ನೆನ್ನೆ ನಂಗೆ ಹೊಸ ರೇಷ್ಮೆ ಲಂಗ ಹಾಕಿ ಚೆನ್ನಾಗಿ ಡ್ರೆಸ್  ಮಾಡಿದ್ರು..........
ಎಷ್ಟು ಜನ ಬಂದಿದ್ರು ಗೊತ್ತ ನನ್ ನೋಡೋಕೆ ......
ನಾನು ಅಪ್ಪ ಅಮ್ಮನ ಜೊತೆ ಹೋಮದ ಮುಂದೆ ಕೂತಿದ್ದೆ ........
ಅಪ್ಪನ ಪಕ್ಕ ಕೂತಿದ್ದವರು ಪುರೋಹಿತರಂತೆ ಅವರು ಅಪ್ಪನ ಹತ್ರ ಏನೇನೊ ಹೇಳಿಸಿದ್ರು  ಏನೇನೊ ಮಾಡಿಸಿದ್ರು  ನಂಗಂತೂ  ಏನು ಅರ್ಥ ನೆ ಆಗ್ಲಿಲ್ಲ
ಸುಮ್ನೆ ಅಮ್ಮನ ಕಾಲ್ ಮೇಲೆ ಕೂತಿದ್ದೆ .....ಆಮೇಲೆ ಅಪ್ಪ ನನ್ ಕಿವಿಯಲ್ಲಿ ಅನಘ ಅಂತ ಮೂರೂ ಸಲ ಹೇಳಿದ್ರು
ಆಗ್ಲೇ ಅದೇ ನನ್ ಹೆಸ್ರು ಅಂತ ಗೊತಾಗಿದ್ದು .......
ಎಲ್ರು ನಂಗೆ ಏನೇನೋ  ಉಡುಗೊರೆ ಕೊಟ್ರು ಗೊತ್ತಾ ????
ಎಷ್ಟು ಚೆನ್ನಾಗಿತ್ತು .........ಫೋಟೊಗಳನ್ನ ಹಾಕಿದ್ದೀನಿ  ನೀವೇ ನೋಡಿ.

Saturday, July 11, 2009

appa baruthaarantae

0

ಇವತ್ತು ನನ್ ಅಪ್ಪ ಜಪಾನ್ನಿಂದ  ಬರ್ತಾ ಇದಾರಂತೆ ......  ಬಂದು ನಂಗೆ ಹೊಸ ಹೆಸ್ರು ಕೊಡ್ತಾರಂತೆ.......  ಆಮೇಲೆ ನನ್ನ ಮತ್ತೆ ಅಮ್ಮನ್ನ ಜಪಾನ್ಗೆ ಕರ್ಕೊಂಡು ಹೋಗ್ತಾರಂತೆ....  ಅಪ್ಪನ ಜೊತೆ ಹೋಗೋಕೆ ನಂಗಂತೂ ತುಂಬಾ ಕುಶಿ ಆಗ್ತಾ ಇದೆ ......  ಆದ್ರೆ ಇಲ್ಲಿ ಎಲ್ರನ್ನು ಬಿಟ್ ಹೋಗಬೇಕಲ್ಲ ಅಂತ ಬೇಜಾರು ..........  ಇನ್ನೊಂದ್ ವಿಷ್ಯ ಗೊತ್ತ ನಿಮ್ಗೆ ?  ಜಪಾನು ತುಂಬಾ ದೂರ ಇದ್ಯಂತೆ ಅಲ್ಲಿಗೆ ಎರೋಪ್ಲೇನಿನಲ್ಲಿಯೇ ಹೋಗಬೇಕಂತೆ ......  ಆದ್ರೆ ನಂಗೇನು ಭಯ ಇಲ್ಲಪ್ಪ ಅಪ್ಪ ಅಮ್ಮ ನನ್ ಜೊತೆ ಇರುತಾರಲ್ಲ ..............  ಇನ್ನೇನು?

Thursday, July 9, 2009

car nalli........

0





ಇವತ್ತು ನಾನು, ನನ್ ದೊಡ್ಡಮ್ಮ ಏನ್ ಮಾಡಿದ್ವಿ ಗೊತ್ತಾ .....    ಮಾವಂಗೆ ಗೊತ್ತೀಲಾದ್ ಹಾಗೇನೆ ಅವರ ಕಾರ್ ಕೀ ನ ತಗೊಂಡು ಹೋಗಿ ಕಾರ್ ನಲ್ಲಿ ಕುತ್ಕೊಂದ್ವಿ ಇನ್ನೇನು ಓಡಿಸಬೇಕು ಅನ್ನೋಸ್ತ್ರಲ್ಲಿ ಅಮ್ಮ ನಮ್ ಫೋಟೋ ಹೊಡೆದುಬಿಟ್ರು ... ಆಮೇಲೆ ಹೋಗಿ ಮಾವಂಗೆ ಹೇಳಿಕೊಟ್ರು ......... ಆದ್ರೆ ನನ್ ಮಾವ ತುಂಬಾ ಒಳ್ಳೆಯವರು...  ಏನು ಬೈಲಿಲ್ಲ ...... ಅದ್ರು ಬದಲು ನನ್ನ ಕಾರಲ್ಲಿ ಒಂದು ರೌಂಡ್ ಕರ್ಕೊಂಡು ಹೋಗಿ ಬಂದ್ರು ...............  ಎಷ್ಟು ಮಜಾ ಇತ್ತು ಗೊತ್ತಾ  !!!!!!!!!!!

Sunday, June 21, 2009

photo session

0

manni

0

ಅಮ್ಮ ಹೇಳ್ತಾ ಇದ್ರೂ ಇವತ್ಹ್ಗ್ದೆ ನಂಗೆ ೫ ತಿಂಗಳು  ತುಮ್ಬ್ತಂತೆ.  ಅದಕ್ಕೆ ಇವತ್ತಿಂದ ಮಣ್ಣಿ ತಿನ್ನಿಸ್ತಾರಂತೆ ....... ಅದ್ರಲ್ಲಿ ರಾಗಿ , ಗೋದಿ , ಇನ್ನು ಏನೇನೋ ಇದ್ಯಂತೆ..  ಅದನ್ನ ತಿಂದ್ರೆ ನಂಗೆ ತುಂಬಾ ಶಕ್ತಿ ಬಂದು ಬೇಗ್ ದೊಡ್ದವಳಾಗ್ ಬಿಡ್ತ್ಹಿನಂತೆ .........

ಊಊಊಊ ................. ತುಂಬಾ ಚೆನ್ನಾಗಿದೆ

Thursday, April 23, 2009

devastana

0

ಇವತ್ತಿಗೆ ನಂಗೆ ಮೂರು ತಿಂಗಳು ತುಂಬಿತು ಅದಕ್ಕೆ ನನ್ನ ಇವತ್ತು ದೇವಸ್ಥಾನಕ್ಕೆ ಕರ್ಕೊಂಡು ಹೋಗಿದ್ರು.ಅದಕ್ಕೆ ನಂಗೆ ಅಮ್ಮ ದಾವಣಗೆರೆ ಅತ್ತೆ ಕೊಡ್ಸಿದ ಹೊಸ ಡ್ರೆಸ್ ಹಾಕಿದರು .ನೋಡಿ ನಾನು ಎಷ್ಟು  ಚೆನ್ನಾಗಿ ಕಾಣಿಸ್ತೀನಿ  ಅಲ್ವ??

Thursday, April 16, 2009

appana mane

0

ನಾನು ನೆನ್ನೆ ಅಜ್ಜನ ಮನೆ ಇಂದ ಅಪ್ಪನ ಮನೆಗೆ ಬಂದ. ನನ್ ಮಾವ ಅವರ ಕಾರಲ್ಲಿ ನನ್ನನು ಕರ್ಕೊಂಡು ಬಂದು ಬಿಟ್ಟು ಹೋದರು .ಅಜ್ಜನ ಮನೆ ಬಿಟ್ಟು ಬರೋಕೆ ನಂಗೆ ಬೇಜಾರಾಗಿತ್ತು. ಆದ್ರೆ ಇಲ್ಲಿ ನನ್ನ ನೋಡೋಕೆ ತುಂಬಾ ಜನ ಬಂದು ಕಾಯುತ ಇದ್ರೂ.  ಅವರ್ನೆಲ್ಲ ನೋಡಿ ನಂಗೆ ಕುಶಿ ಆಯಿತು. ಇಲ್ಲೂ ನಂಗೆ ಅಜ್ಜ, ದೊಡಮ್ಮ , ಅತ್ತೆ, ಮಾವ ,ಅಕ್ಕ ಎಲ್ರು ಇದ್ದಾರೆ .ಮತ್ತೆ ಝಾನ್ಸಿ ಅಂತ ಒಂದು ನಾಯಿ ಕೂಡ ಇದೆ .ಅವರೆಲ್ಲರು ಕೂಡ ನನ್ನ ತುಂಬಾ ಪ್ರೀತಿಸುತಾರೆ .

Wednesday, March 25, 2009

nanna muthajjiyaru

0

Sunday, March 22, 2009

yeradane tingalu

0

 ಇವತ್ತಿಗೆ ನಾನು ಹುಟ್ಟಿ ಎರಡು ತಿಂಗಳು ಆಯಿತು .ನನ್ ಅಮ್ಮ ಅದಕ್ಕೆ ಇವತ್ತು ಹೊಸ ಅಂಗಿ ಹಾಕಿದರು .ಇದು ನಮ್ ಅಪ್ಪ ನನ್ನ ನೋಡೋಕೆ ಬರ್ಬೇಕಾದ್ರೆ ಜಪಾನ್ ಇಂದ ತಗೊಂಡು ಬಂದಿದ್ದಂತೆ .ಹೇಗಿದೆ ನನ್ ಅಂಗಿ? ಚೆನ್ನಾಗಿದೆ ಅಲ್ವ??

Sunday, February 1, 2009

hosa tottilu

0

ಇವತ್ತು ನಾನು ಹುಟ್ಟಿ ೧೧ ದಿನ ಆಯಿತು! ಅಪ್ಪ ನೆನ್ನೆನೆ ಜಪಾನ್ಗೆ ಹೋದರು....... ಅವರು ಅಲ್ಲೇ ಅಲ್ವ ಕೆಲಸ  ಮಾಡೋದು. ನನ್ ಸೋದರ ಮಾವ ಇವತ್ತು ಹೊಸ ಕಿವಿ ಓಲೆ ಕೊಡಿಸಿದರು! ಅದನ್ನ ಹಾಕೋ ಬೇಕಾದರೆ ತುಂಬಾನೇ ನೋವು ಆಯಿತು .ಬೇಕಾದರೆ ನೀವೇ ನೋಡಿ ನಾನು  ಹೇಗೆ ಅಳುತ ಇದೀನಿ ಅಂತ.

ಸಂಜೆ ನನ್ನ ನೋಡೋಕೆ ತುಂಬಾ ಜನ ಬಂದಿದ್ರು.ಅವರೆಲ್ಲ ಸೇರಿ ನನ್ನನು ತೊಟ್ಟಿಲುಗೆ ಹಾಕಿದರು.ಹೇಗಿದೆ ನನ್ ತೊಟ್ಟಿಲು ? ಚೆನ್ನಾಗಿದೆ ಅಲ್ವ .......ನಂಗು ತುಂಬಾ ಇಷ್ಟ ಆಯಿತು .

Thursday, January 22, 2009

Nan modlne Blog

0

ಎಲ್ಲರಿಗೂ ನಮಸ್ಕಾರ




ಹೇಗಿದ್ದೀರಾ ? ನಾನು ಈಗ ತಾನೇ ಭೂಮಿಗೆ ಬಂದೆ .ಈ ಊರು ಹೆಸರು ಬ್ಯಾಂಗಲೋರ್ ಅಂತೆ .ಇವತ್ತು ಜನವರಿಯಲ್ಲಿ  ೨೨ನೆ ತಾರೀಕು  ೨೦೦೯ನೆ ಈಸವಿ ಅಂತೆ .ನನ್ ಅಪ್ಪನ ಹೆಸರು ಗುರುರಾಜ ಅಂತೆ ಅಮ್ಮನ ಹೆಸರು ಶುಭ ಅಂತೆ.